ಸ್ತೋತ್ರ 161 Preeti Bhaktaroleshtu Ramya ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪ್ರೀತಿ ಭಕ್ತರೊಳೆಷ್ಟು ರಮ್ಯ – ಭ್ರಾತ
ಪ್ರೀತಿ ಭಕ್ತರೊಳೆಷ್ಟವಶ್ಯ
ಪ್ರೀತಿ ಕರ್ತನು ಕೊಟ್ಟ ನೀತಿ ನೇಮಕ ನೋಡು
ಪ್ರೀತಿಪೂರಿತ ಹೃದಯ ಭೀತಿಯಂ ಕಾಣದು
1. ಪ್ರೇಮ ಭಕ್ತರ ಮುಖ್ಯ ಗುರುತು – ಆತ್ಮ
ಕ್ಷೇಮ ತೋರಿಸುವಂಥ ಗುರುತು
ಪ್ರೇಮಪೂರಿತ ಜನರ ನಾಮ ಪರಿಮಳದಂತೆ
ಭೂಮಿಯೆಲ್ಲವ ತುಂಬಿ ಕ್ಷೇಮವಂ ಪಾಲಿಪ
2. ಪರದೊಳೆಂದಿಗು ಪ್ರೀತಿ ಇರುತೆ – ಅಲ್ಲಿ
ನರರ ಆತ್ಮವ ತುಂಬಿ ಇರುತೆ
ಧರಣಿಯಲ್ಲಿಯೆ ಪ್ರೀತಿವರವಿಲ್ಲದವನನ್ನು
ಪರಮ ಸನ್ನಿಧಿಯಲ್ಲಿ ಗುರುವು ಸೇರಿಸಲಾರ
3. ಒಂದು ನಾಮವ ಹೊಂದಿದವರು – ಎಲ್ಲ
ರೊಂದೇ ಸ್ನಾನವ ಹೊಂದಿದವರು
ಒಂದು ಕೋರಿಕೆಯಿಂದ ಒಂದು ಕಟ್ಟೊಳು ಸೇರಿ
ತಂದೆಯೊಬ್ಬನ ನಾಮ ವಂದಿಪ ದಾಸರ
4. ಸತ್ಯ ಪಿತೃಭಾವವ ವಹಿಸಿ – ಭಕ್ತ
ನಿತ್ಯದ್ರೋಹಗಳನ್ನು ಸಹಿಸಿ
ಅತ್ಯಮೂಲ್ಯನ ಹೆಜ್ಜೆ ಭೃತ್ಯಭಾವದೆ ಹಿಡಿದು
ನಿತ್ಯ ಭ್ರಷ್ಟರಿಗೊಳ್ಳೆ ಕೃತ್ಯವ ಮಾಡುವ
5. ದೇವಭಕ್ತರ ಕರ್ತಾ ಬಂದು – ನಿನ್ನ
ಭಾವ ನಮ್ಮೊಳು ಹುಟ್ಟಿಸಿಂದು
ನಾವು ತುಂಬಿದ ಪ್ರೇಮಭಾವವುಳ್ಳವರಾಗಿ
ಯಾವ ಕಾಲದಿ ಬಿಡದೆ ಜೀವಿಸ ಮಾಡಿಸು
Preeti Bhaktaroleshtu Ramya – Bhraata
Preeti Bhaktaroleshtavashya
Preeti Kartanu Kotta Neeti Nemaka Nodu
Preetipoorita Hrudaya Bheetiyam Kaanadu
1. Prema Bhaktara Mukhya Gurutu – Aatma
Kshema Torisuvantha Gurutu
Premapoorita Janara Naama Parimaladante
Bhoomiyellava Tumbi Kshemavam Paalipa
2. Paradolendigu Preeti Irute – Alli
Narara Aatmava Tumbi Irute
Dharaniyalliye Preetivaravilladavanannu
Parama Sannidhiyalli Guruvu Serisalaara
3. Ondu Naamava Hondidavaru – Ella
Ronde Snaanava Hondidavaru
Ondu Korikeyinda Ondu Kattolu Seri
Tandeyobbana Naama Vandipa Daasara
4. Satya Pitrubhaavava Vahisi – Bhakta
Nityadrohagalannu Sahisi
Atyamoolyana Hejje Bhrutyabhaavade Hididu
Nitya Bhrashtarigolle Krutyava Maaduva
5. Devabhaktara Kartaa Bandu – Ninna
Bhaava Nammolu Huttisindu
Naavu Tumbida Premebhaavavullavaraagi
Yaava Kaaladi Bidade Jeevisa Maadisu