ಸ್ತೋತ್ರ 158 Ninna Suswaravannu Naanaalisuvante ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ನಿನ್ನ ಸುಸ್ವರವನ್ನು ನಾನಾಲಿಸುವಂತೆ
ಎನ್ನಂತರಂಗದ ಕಿವಿಗಳ ತೆರೆಯೈ
ನಿನ್ನಂ ಬಿರುಗಾಳಿಯಲಿ ಭೂಕಂಪದಲಿ ಕಾಣೆ
ನಿನ್ನ ಕ್ರುಪಾಧ್ವನಿ ಮಂದಮಾರುತವದು
1. ಪಾಪಲೋಕದ ತೀವ್ರಭವದ ಸಂದಣಿಯಿಂದ
ನಾ ಪಾರಾಗುವೆನು ಏಕಾಂತವಾಗಿ
ನಾ ಪೂರ್ಣಭಯಭಕ್ತಿಯಿಂದ ಕಾದಿರುವೆನೈ
ಆ ಪುಣ್ಯಧ್ವನಿ ಕೇಳಲಾಂತರ್ಯದಿ
ಈ ಪರಿ ದೇಹದ ವ್ಯಾಪಾರ ನಿಲ್ಲಿಪೆ
ಓಪನೆ ತಿಳಿಸಯ್ಯಾ ನಿನ್ನ ಪ್ರೀತಿಯ ಮರ್ಮ
2. ಎನ್ನ ಭಾರವ ಹೊತ್ತೆ ಗುರಿಯಾದೆ ಮರಣಕ್ಕೆ
ಮುನ್ನ ಜ್ಞಾನವನಿತ್ತೆ ಹರಿದ ರಕ್ತದಲಿ
ನಿನ್ನ ಶಿಲುಬೆಯ ಮರ್ಮವನ್ನು ಬೋಧಿಸೆನಗೆ
ನಿನ್ನೊಂದಿಗೆ ಸತ್ತು ಬದುಕಲು ಕಲಿಸೈ
ಮಣ್ಣಿನಂತೆಣಿಸಲು ಪ್ರಭುವೇ ನೀ ಬೋಧಿಸೈ
3. ಎನ್ನಾಂತರ್ಯದ ಪಾಪವೆಂತು ಅಗಾಧವೋ
ಎನ್ನಪನಂಬಿಕೆ ಗರ್ವವೆಷ್ಟೋ
ಕಣ್ಣಿಗೆ ಕಾಣಿಸೋ ಹೆಮ್ಮೆಯ ಮನದವ
ನೆನ್ನ ನೀ ಕೊಂಡಿಗೆ ರಕ್ತದಿಂದ
ಎನ್ನೊಳು ನೆಲಸಿರ್ಪ ಎನ್ನಾಗದಭಿಲಾಷೆ
ಯನ್ನು ಬಂಧಿಸು ನಿನ್ನ ಅತಿಶಯಬಲದಿಂದ
4. ನಿನ್ನ ಬಸ್ತದೊಳಿರ್ಪುದೆನ್ನ ಜೀವವೆಲ್ಲ
ನಿನ್ನ ಕಡೆಗೆ ತಿರುಗಿಸೆನ್ನಯ ಮನವ
ಇನ್ನು ಮಂದಮತಿಗಾದರೂ ಕಲಿಸುವೆ
ನಿನ್ನ ಸದ್ಧರ್ಮವಂ ಸತ್ಪ್ರಭುವೇ
ಉನ್ನತ ಪ್ರೀತಿಶಕ್ತಿಜ್ಞಾನರೂಪನು ನೀನೆ
ನಿನ್ನೆಲ್ಲ ವರಗಳನೀಯುವೆ ನೀನೆನಗೆ
Ninna Suswaravannu Naanaalisuvante
Ennantarangada Kivigala Tereyai
Ninnam Birugaaliyali Bhookampadali Kaane
Ninna Krupaadhwani Mandamaarutavadu
1. Paapalokada Teevrabhavada Sandaniyinda
Naa Paaraaguvenu Ekaantavaagi
Naa Poornabhayabhaktiyinda Kaadiruvenai
Aa Punyadhwani Kelalaantaryadi
Ee Pari Dehada Vyaapaara Nillipe
Opane Tilisayyaa Ninna Preetiya Marma
2. Enna Bhaarava Hotte Guriyaade Maranakke
Munna Gnaanavanitte Harida Raktadali
Ninna Shilubeya Marmavannu Bodhisenage
Ninnondige Sattu Badukalu Kalisai
Manninantenisalu Prabhuve Nee Bodhisai
3. Ennaantaryada Paapaventu Agaadhavo
Ennapanambike Garvaveshto
Kannige Kaaniso Hemmeya Manadava
Nenna Nee Kondige Raktadinda
Ennolu Nelasirpa Ennaagadabhilaashe
Yannu Bandhisu Ninna Atishayabaladinda
4. Ninna Bastadolirpudenna Jeevavella
Ninna Kadege Tirugisennaya Manava
Innu Mandamatigaadaroo Kalisuve
Ninna Saddharmavam Satprabhuve
Unnata Preetishaktignaanaroopanu Neene
Ninnella Varagalaneeyuve Neenenage