ಸ್ತೋತ್ರ 156 Muktikoduva Maarga ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮುಕ್ತಿಕೊಡುವ ಮಾರ್ಗ ಇಕ್ಕಟ್ಟೆಂದು ತಿಳಿದಿರು – ಅದನು
ಭಕ್ತ ಕಷ್ಟದಿಂದ ಮಾತ್ರ ನೋಳ್ಪ ಕಂಡಿರು
1. ನಿತ್ಯ ನಾಶನಕ್ಕೆ ಪೋಪ ಮಾರ್ಗವಗಲವು – ಇದರ
ಸತ್ಯ ತಿಳಿದು ಕೆಟ್ಟ ಕೃತ್ಯ ನಾವು ಬಿಡುವೆವು
2. ಲೋಕಚಿಂತೆಯಿಂದ ತುಂಬಿ ಇರುವ ಮಿತ್ರನೆ – ಪರಮ
ಲೋಕವನ್ನು ಕಂಡುಕೊಳ್ಳಲಾರಿ ಮನುಜನೇ
3. ಓಟಗಾರ ಭಾರವೆಲ್ಲ ಬಿಟ್ಟು ಓಡುವ – ಹೀಗೆ
ತೇಟೆಯಾದ ಭಕ್ತ ತನ್ನ ಭಾರ ಬಿಡುವನು
4. ಯುದ್ದದಲ್ಲಿ ಜೈಸುವವರು ಜೀವ ಕಾಂಬರು – ಪರಮ
ಶುದ್ದಲೋಕದಲ್ಲಿ ಅವರು ಸ್ಥಳವ ಅಂಬರು
5. ತಂದೆ ಸನಿಹ ಕ್ರಿಸ್ತನಿಂದ ಧನ್ಯರಪ್ಪರು – ಅವರು
ಕುಂದದಂಥ ಭಾಗ್ಯವನ್ನು ನಿತ್ಯ ಪಡೆದರು
Muktikoduva Maarga Ikkattendu Tilidiru – Adanu
Bhakta Kashtadinda Maatra Nolpa Kandiru
1. Nitya Naashanakke Popa Maargavagalavu – Idara
Satya Tilidu Ketta Krutya Naavu Biduvevu
2. Lokachinteyinda Tumbi Iruva Mitrane – Parama
Lokavanu Kandukollalaari Manujane
3. Otagaara Bhaaravella Bittu Oduva – Heege
Teteyaada Bhakta Tanna Bhaara Biduvanu
4. Yuddadalli Jaisuvavaru Jeeva Kaambaru – Parama
Shuddalokadalli Avaru Sthalava Ambaru
5. Tande Saniha Kristaninda Dhanyarapparu – Avaru
Kundadantha Bhaagyavannu Nitya Padedaru
