Site icon Treasure Hymns – Kannada

ಸ್ತೋತ್ರ 155 Horage Shatrugalu Muttiralu ಸಾಹಿತ್ಯ

ಸ್ತೋತ್ರ 155 Horage Shatrugalu Muttiralu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಹೊರಗೆ ಶತ್ರುಗಳು ಮುತ್ತಿರಲು – ಎನ್ನ
ಊರದೆ ವೈರಿ ಸಮೂಹವಿರಲು
ಧರಣಿಯ ಪಾಪವು ನರಕವು ಎದುರಿಸೆ
ಅರಿಯೆ ಭೀತಿಯನೆನ್ನ ಗುರುವೇಸು ಬಳಿಯಿರೆ

1. ಇರಲಿ ಸಾವಿರ ಶತ್ರುಗಣವು – ಎನ್ನ
ನಿರಿಯಲು ಬರಲಿ ಲೋಕಗಳು
ಮರೆಸಿ ಕಾವ ಗುರಾಣಿ ಇರ್ಪುದೆನಗೆ ದೈವ
ವರಯಾಗಪಶುರಕ್ತ ಸುರಿಪ ಚಿತ್ರಾಯುಧ

2. ಸೈತಾನನಿಂದ ತಪ್ಪಿಸಲು – ಕೆಟ್ಟ
ಭೂತಲಬಲದಿಂ ಬಿಡಿಸಲು
ಪಾತಕ ಹರಿಸಿ ದುಷ್ಟತ್ವದಿಂ ಕಾಯಲು
ಪೂತ ಕರ್ತನು ಬಂದ ಪರದಿಂದಲೆನಗಾಗಿ

3. ಉಂಟು ರಕ್ಷಣೆ ಆತನಿಂದ – ಪಾಪ
ಕಂಟಕಮೃತಿನರಕದಿಂದ
ಉಂಟು ರಕ್ಷಣೆ ಮೊಕ್ಷಾನಂದ ಪದವಿ ಸೇರ
ಉಂಟು ಯೇಸು ನಾಮದಿ ಪೂರ್ಣಸಂರಕ್ಷಣೆ

 

 

Horage Shatrugalu Muttiralu – Enna
Urade Vairi Samoohaviralu
Dharaniya Paapavu Narakavu Edurise
Ariye Bheetiyanenna Guruvesu Baliyire

1. Irali Saavira Shatruganavu – Enna
Niriyalu Barali Lokagalu
Maresi Kaava Guraani Irpudenage Daiva
Varayaagapashurakta Suripa Chitraayudha

2. Saitaananinda Tappisalu – Ketta
Bhootalabaladim Bidisalu
Paataka Harisi Dushtatvadim Kaayalu
Poota Kartanu Banda Paradindalenagaagi

3. Untu Rakshane Aataninda- Paapa
Kantakamrutinarakadinda
Untu Rakshane Mokshaanandapadavi Sera
Untu Yesu Naamadi Poornasamrakshane

Exit mobile version