ಸ್ತೋತ್ರ 152 Devaremage Aashraya Indoo Endoo ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವರೆಮಗೆ ಆಶ್ರಯ ಇಂದೂ ಎಂದೂ
1. ದೈವ ತಂದೆ ಬೆಳಕ ಕೊಟ್ಟು ಜೀವಮಾರ್ಗದಲ್ಲಿ ನಡಿಸಿ
ಕಾವಲಿದ್ದು ಆತನೆಮಗೆ ಯಾವ ಭಯವು ಇಲ್ಲದಂತೆ
2. ಕೂಗುವಂಥ ನಮ್ಮ ಮೊರೆಯ ನೀಗಿ ತಳ್ಳಿಬಿಡದೆ ಕೇಳು
ಬೇಗ ಕಾದು ತನ್ನ ಹೆಸರಿಗಾಗಿ ನಡಿಸುತ್ತಿರುವನಾತ
3. ಬಿಡದೆ ನಮ್ಮ ಹತ್ರವಿದ್ದು ನಡಿಸಿ ನಮ್ಮ ಪಾದವನ್ನು
ಎಡವವಿ ಬೀಳದಂತೆ ಮಾಡಿ ಪೊಡವಿಯಲ್ಲಿ ಪೋಷಿಸುವನು
4. ಕಾಣುವಂಥ ಹಗೆಯನಳಿಸಿ ಕಾಣದಂಥ ಮೋಸಬಿಡಿಸಿ
ಪ್ರಾಣವನ್ನು ಕಷ್ಟದಿಂದ ತ್ರಾಣವುಳ್ಳ ಕರ್ತ ಕಾಯ್ವ
5. ಪರಮ ತಂದೆ ಹತ್ರವಿದ್ದು ಹೊರಟುಪೋಪ ವೇಳೆಯಲ್ಲಿ
ತಿರುಗಿ ಬರುವ ಕಾಲದಲ್ಲಿ ಸೊರಗದಂತೆ ನಡಿಸುತಿರುವ
Devaremage Aashraya Indoo Endoo
1. Daiva Tande Belaka Kottu Jeevamaargadalli Nadisi
Kaavaliddu Aatanemage Yaava Bhayavu Illadante
2. Kooguvantha Namma Moreya Neegi Tallibidade Kelu
Bega Kaadu Tanna Hesarigaagi Nadisuttiruvanaata
3. Bidade Namma Hatraviddu Nadisi Namma Paadavannu
Edavavibeeladante Maadi Podaviyalli Poshisuvanu
4. Kaanuvantha Hageyanalisi Kaanadantha Mosabidisi
Praanavannu Kashtadinda Traanavulla Karta Kaayva
5. Parama Tande Hatraviddu Horatupopa Veleyalli
Tirugi Baruva Kaaladalli Soragadante Nadisutiruva
