Site icon Treasure Hymns – Kannada

ಸ್ತೋತ್ರ 149 Manave Shaanthatheyaanthiru – Enna ಸಾಹಿತ್ಯ

ಸ್ತೋತ್ರ 149 Manave Shaanthatheyaanthiru – Enna ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಮನವೇ ಶಾಂತತೆಯಾಂತಿರು – ಎನ್ನ
ಜನಕನು ಕಾಯುವನು

1. ಅನುಮಾನಿಸದಿರು ಭಯಭೀತಿಯ ಬಿಡು
ಘನದೇವರು ಬಿಡನು – ತನ್ನ
ತನು ರಕ್ತದಿ ಎನ್ನ ರಕ್ಷಿಸಿದಾತನು
ಅನಿಶವು ಕಾಯುವನು

2. ಘೋಷಿಪ ಜಲಗಳ ನಡುವೆ ನಾ ಪೋಗಲು
ಆಸರೆಯಾಗಿಹನು – ಅವು
ದಾಸನ ಮುಳುಗಿಸಲಾರವು ದೇವರು
ವಾಸಿವನು ಆಲ್ಲಿಯು

3. ಉರಿಯುವ ಬೆಂಕಿಯ ನಡುವೆ ನಾ ಪೋಗಲು
ವರಕರ್ತನ ನೋಡುವೆ – ಅದು
ಉರಿಯನು ತೊರೆದಾಡುವದೆನ್ನ ಸುತ್ತಲು
ವರಶಕ್ತನ ನುತಿಪೆ

4. ಭೀಕರ ಶೋಧನೆಗಳು ಮುತ್ತಿರಲೆನ್ನ
ಓ ಕರ್ತನೇ ರಕ್ಷಿಸು – ನಿನ್ನ
ಶ್ರೀಕರಕರಗಳಿಂದಾವರಿಸೆನ್ನನು
ನೀ ಕರುಣಿಸಿ ಸಲಹು

5. ಘೋರವಿಪತ್ತಿನ ಕಾರಿರುಳು ಎನ್ನ
ಪಾರದುರಿಚ್ಹೆಗಳು – ಬಹು
ಮೀರಿ ಬರಲು ನಿನ್ನ ಶಾಂತಿನಿನಾದವು
ಭೂರಿ ಹರುಷವೀವದು

 

 

Manave Shaanthatheyaanthiru – Enna
Janakanu Kaayuvanu

1. Anumaanisadiru Bhayabheethiya Bidu
Ghanadevaru Bidanu – Thanna
Thanu Rakthadi Enna Rakshisidaathanu
Anishavu Kaayuvanu

2. Ghoshipa Jalagala Naduve Naa Pogalu
Aasareyaagihanu – Avu
Daasana Mulugisalaaravu Devaru
Vaasivanu Alliyu

3. Uriyuva Benkiya Naduve Naa Pogalu
Varakarthana Noduve – Adu
Uriyanu Thoredaaduvadenna Sutthalu
Varashakthana Nuthipe

4. Bheekara Shodhanegalu Mutthiralenna
O Karthane Rakshisu – Ninna
Shreekarakara galindaavarisennanu
Nee Karunisi Salahu

5. Ghoravipatthina Kaarirulu Enna
Paaradurichhegalu – Bahu
Meeri Baralu Ninna Shaanthininaadavu
Bhoori Harushaveevadu

Exit mobile version