Site icon Treasure Hymns – Kannada

ಸ್ತೋತ್ರ 147 Bhayavu Yaake Namage – Devara ಸಾಹಿತ್ಯ

ಸ್ತೋತ್ರ 147 Bhayavu Yaake Namage – Devara ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಭಯವು ಯಾಕೆ ನಮಗೆ – ದೇವರ
ದಯವು ಇರುವವರೆಗೆ
ಪಯಣದ ಭಾರವನೊಯಿದರೆ ಆತಗೆ
ದಯದಿ ಸಮೀಪವೇ ನಯಿಸುತಲಿರುವನು

1. ಬೇಡುವಂಥವರಿಗೆ ಕ್ರುಪೆಯನು
ನೀಡುವ ಮನದೊಳಗೆ
ಕಾಡುವ ಪಾಪದ ಝಾಡಿಸಿ ನಿಜದಿಂ
ದೋಡಿ ಸಜ್ಜನರ ಕೂಡುವೆವಾದರೆ

2. ನಿಂದೆಯಿದ್ದರೇನು – ದುಷ್ಟರ
ಬಂಧವಿದ್ದರೇನು
ತಂದೆಯು ಶಿಷ್ಯರಿಗೆಂದಿಗೂ ಈಯುವ
ಸುಂದರಾತ್ಮನಂ ಹೊಂದುವೆವಾದರೆ

3. ಕಷ್ಟಕಾಲದಲ್ಲಿ – ಸರ್ವರ
ಸೃಷ್ಟಿಕರ್ತನಲಿ
ಇಷ್ಟದಿ ಭಕ್ತಿವಿಶಿಷ್ಟವವನಿಟ್ಟರೆ
ನಷ್ಟದಿ ಬಿಡಿಸುತ ತುಷ್ಟಿಯ ಪಾಲಿಪ

4. ಪ್ರೇಮಪುತ್ರನನ್ನು – ಲೋಕದ
ಕ್ಷೇಮಕೆ ಕೊಟ್ಟವನು
ವ್ಯೋಮಾನಂದವ ಪ್ರೇಮದಿಂದೀವನು
ಪಾಮರತನವನ್ನು ನೇಮದಿ ತೊರೆದರೆ

5. ಹೆಚ್ಚು ಭಾಗ್ಯ ನಮಗೆ – ಸ್ವಾಮಿಯು
ಮೆಚ್ಚಿ ಕೊಡುವ ಕೊನೆಗೆ
ಎಚ್ಚರದಿಂದಲೇ ತುಚ್ಚರ ನೀಗಿ ದು
ರಿಚ್ಚೆಗಳೆಲ್ಲವ ನೆಚ್ಚದೆ ಇದ್ದರೆ

 

 

Bhayavu Yaake Namage – Devara
Dayavu Iruvavarege
Payanada Bhaaravanoyindare Aathage
Dayadi Sameepave Nayisuthaliruvanu

1. Beduvanthavarige Krupeyanu
Needuva Manadolage
Kaaduva Paapada Jhaadisi Nijadim
Dodi Sajjanara Kooduvevaadare

2. Nindeyiddarenu – Dushtara
Bandhaviddarenu
Thandeyu Shishyarigendigoo Eeyuva
Sundaraathmanam Honduvevaadare

3. Kashtakaaladalli – Sarvara
Srushtikarthanali
Ishtadi Bhakthivishishtava vanittare
Nashtadi Bidisutha Thushtiya Paalipa

4. Premaputhranannu – Lokada
Kshemake Kottavanu
Vyomaanandava Premadindeevanu
Paamarathanavannu Nemadi Thoredare

5. Hechhu Bhaagya Namage – Swaamiyu
Mechhi Koduva Konege
Echharadindale Thuchhara Neegi Du
Richhegalellava Nechhade Iddare

Exit mobile version