Site icon Treasure Hymns – Kannada

ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ

ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ದೇವರು ಕಾಯುವನು – ನಿತ್ಯವು
ಪಾವನ ಮಾಡುವನು
ಕಾವಳದಿಂದಲೇ ತೀವಿದ ಲೋಕದೊ
ಳೀವನು ಬೆಳಕ ಯೆಹೋವನು ಪ್ರೇಮದಿ

1. ಕಷ್ಟದ ಕಾಲದೊಳು – ಬಹುತರ
ನಷ್ಟದ ವೇಳೆಯೊಳು
ಶಿಷ್ಟರ ಕರ್ತನು ಭ್ರಷ್ಟರ ಹತ್ರಕೆ
ಇಷ್ಟದಿಂದೈದುವ ತುಷ್ಟಿಯ ನೀಡಲು

2. ಧರಣಿಯ ಪಯಣದೊಳು – ಕಾಡುವ
ದುರುಳರ ಮಧ್ಯದೊಳು
ಕರುಣವೆರಸಿ ತನ್ನ ಕರದಿಂದ ನಮ್ಮನ್ನು
ಹರುಷದಿ ನಡಿಸುತ ವರಗಳ ಪಾಲಿಪ

3. ಶೋಧನೆಗಳು ನಮಗೆ – ಲೋಕದ
ಬಾಧೆ ಹಲವು ಮಸಗೆ
ರೋಧನೆ ಹರಿಸುವ ಮೋದದ ಕರ್ತನ
ಪಾದವ ಪಿಡಿದರೆ ವೇದನೆ ನೀಗಿಪ

4. ಕುಂದಿದ ಭಕ್ತರನು – ಕನಿಕರ
ದಿಂದಲೇ ನೋಡುವನು
ಚಂದದ ವರಗಳ ಬೃಂದದಿ ಪಾಲಿಸಿ
ಸುಂದರರಾಜ್ಯದೊಳೆಂದಿಗೂ ಸೇರಿಪ

5. ಚಿಂತೆಯೆಲ್ಲವ ಬಿಟ್ಟು – ಭಕ್ತಿಯ
ನಂತನ ಮೇಲಿಟ್ಟು
ಸಂತಸದಿಂದಲೆಯಂತರವಂ ಸತ್ಯ
ವಂತಗೊಪ್ಪಿಸೆ ಪುಣ್ಯವಂತರನಾಗಿಪ

 

 

Devaru Kaayuvanu – Nithyavu
Paavana Maaduvanu
Kaavaladindale Theevida Lokado
Leevanu Belaka Yehovanu Premadi

1. Kashtada Kaaladolu – Bahuthara
Nashtada Veleyolu
Shishtara Karthanu Bhrashtara Hathrake
Ishtadindaiduva Thushtiya Needalu

2. Dharaniya Payanadolu – Kaaduva
Durulara Madhyadolu
Karunaverasi Thanna Karadinda Nammannu
Harushadi Nadisutha Varagala Paalipa

3. Shodhanegalu Namage – Lokada
Baadhe Halavu Masage
Rodhane Harisuva Modada Karthana
Paadava Pididare Vedane Neegipa

4. Kundida Bhaktharanu – Kanikara
Dindale Noduvanu
Chandada Varagala Brundadi Paalisi
Sundararaajyado lendigoo Seripa

5. Chinteyellava Bittu – Bhakthiya
Nanthana Melittu
Santhasadindale yantharavam Sathya
Vanthagoppise Punyavanthara naagipa

Exit mobile version