ಸ್ತೋತ್ರ 140 Paramaanandavanaantiru ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪರಮಾನಂದವನಾಂತಿರು – ಓ ಮನವೇ ನೀ
ಪರಮಾನಂದವನಾಂತಿರು
1. ಕಾದಿಪ ಭೀತಿಯನು ನಡುಗುವಿಕೆಯನು
ಓಡಿಸುತೀಪರಿ ಪರದ ಪಥವ ಪಿಡಿದು
2. ನಿತ್ಯ ಜೀವದ ದಾರಿ ಇಕ್ಕಟ್ಟಿಂದರಿಯುತೆ
ನಿತ್ಯದೇವರನ್ನೀಗ ಮರೆಯದೆ ಸ್ಮರಿಸುತೆ
3. ಮರಣಾಧೀನರು ನಿತ್ಯವಾಯಾಸಗೊಳುವರು
ಮರೆಯದೆ ಭಕ್ತಪಾಲ ಸರ್ವಶಕ್ತದೇವನನು
4. ನಿರಂತರವಾದುದು ದೇವರ ಶಕ್ತಿಯು
ಚಿರಂಜೀವಿಯಾದುದು ಯುಗಯುಗದೊಳಗೆ
5. ನಿತ್ಯ ಜೀವದ ಒರತೆ ಸತ್ಯದೇವನು ತಾನೇ
ನಿತ್ಯವೂ ಮಾನವರು ಪಾನವ ಗೈವರು
6. ಹದ್ದುಗಳಂತೆ ನಾವೂ ವಾಯುಮಂಡಲದೊಳು
ಎದ್ದು ಏರ್ವೆವು ಮೇಲೆ ದಯದ ರೆಕ್ಕೆಯ ಹೊಂದಿ
7. ಧರಿಸುತ ಹರ್ಷವ ಮೆರೆಯುತ ನಿತ್ಯವು
ಸ್ಮರಿಸುತ ಕರ್ತನ ಪರಿಶುದ್ದ ಪ್ರೀತಿಯನು
Paramaanandavanaantiru – O Manave Nee
Paramaanandavanaantiru
1. Kaadipa Bheetiyanu Naduguvikeyanu
Odisuteepari Parada Pathava Pididu
2. Nitya Jeevada Daari Ikkattindariyute
Nityadevaranneega Mareyade Smarisute
3. Maranaadheenaru Nityavaayaasagoluvaru
Mareyade Bhaktapaala Sarvashaktadevananu
4. Nirantaravaadudu Devara Shaktiyu
Chiranjeeviyaadudu Yugayugadolage
5. Nitya Jeevada Orate Satyadevanu Taane
Nityavu Maanavaru Paanava Gaivaru
6. Haddugalante Naavoo Vaayumandaladolu
Eddu Ervevu Mele Dayada Rekkeya Hondi
7. Dharisuta Harshava Mereyuta Nityavu
Smarisuta Kartana Parishudda Preetiyanu