ಸ್ತೋತ್ರ 137 Girigala Kittu Mugisuvantha ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಗಿರಿಗಳ ಕಿತ್ತು ಮುಗಿಸುವಂಥ
ವರವಿಶ್ವಾಸವ ನೀಡು ಪ್ರಭೋ
ಧರಣಿಯೊಳು ನಿನ್ನಯ ಮಂದಿರ ಕಟ್ಟಲು
ಸ್ಥಿರಪ್ರಾರ್ಥನಾಬಲವೀಯೆನಗೆ
ಗುರುಪ್ರೀತಿಯು ಆವರಿಸಲಿ ಮನವ
ವರಿಸಲಿ ತನುಮನ ಗುರುಸೇವೆಯನೆ
1. ಗುರುವನ್ನರಿಯದ ನರರ ರಕ್ಷಣೆಗೆ
ಧರೆಯೊಳು ಕಾಲವ ಕಳೆಯುವೆನೈ
ನರಕುಲಸೇವೆಯೊಳ್ ಸರ್ವಸ್ವವನು
ತೆರುವೆ ಈ ಜೀವದ ಧಾರೆಯನೆರೆದು
ಕರುಣಾಕರಾ ನಿನ್ನ ಸರಣಿಯೊಳ್ ನಡೆದು
ಕರುಣೆಯ ತೋರುವೆ ಮರಣದವರೆಗು
2. ಎನ್ನಯ ಭಾಗ್ಯವ ವರಗಳ ಗುಣಗಳ
ನಿನ್ನಯ ಕರಗಳಿಗೊಪ್ಪಿಸುವೆ
ನಿನ್ನ ಸದ್ವಾಕ್ಯವ ಜನರಿಗೆ ಸಾರುತ
ನಿನ್ನ ಮಹಿಮೆಗಾಗಿ ಜೀವಿಸುವೆ
ಎನ್ನಯ ಬಾಳಿನ ಪ್ರತಿಗಳಿಗೆಯೊಳು
ಖಿನ್ನರ ಮಿತ್ರನಂ ಪ್ರಕಟಿಸುವೆ
3. ದೇವರ ಪ್ರೀತಿಯಿಂದೆನ್ನ ಮನವನು
ದೀವಿಸಿ ಬೆಳಗುತ ಪ್ರಜ್ವಲಿಸಲು
ಈ ವಿಧದಲಿ ಎನ್ನ ಶಕ್ತಿಯನೆಲ್ಲವ
ನಾ ವಿನಿಯೋಗಿಪೆ ಮಾನವರಕ್ಷಗೆ
ಪಾವನಗುರುವಿನ ಇರಿದಿಹ ಪಕ್ಕೆಗೆ
ಹೇವ ಪಾಪಿಗಳನು ಸೇರಿಸುವೆ
Girigala Kittu Mugisuvantha
Varavishwaasava Needu Prabho
Dharaniyolu Ninnaya Mandira Kattalu
Sthira prarthanaabala veeyenage
Gurupreetiyu Aavarisali Manava
Varisali Tanumana Guruseveyane
1. Guruvannariyada Narara Rakshanege
Dhareyolu Kaalava Kaleyuvenai
Narakulaseveyol Sarvaswavanu
Teruve Ee Jeevada Dhaareyaneredu
Karunaakaraa Ninna Saraniyol Nadedu
Karuneya Toruve Maranadavaregu
2. Ennaya Bhaagyava Varagala Gunagala
Ninnaya Karagaligoppisuve
Ninna Sadwaakyava Janarige Saaruta
Ninna Mahimegaagi Jeevisuve
Ennaya Baalina Pratigaligeyolu
Khinnara Mitranam Prakatisuve
3. Devara Preetiyindenna Manavanu
Deevisi Belaguta Prajvalisalu
Ee Vidhadali Enna Shaktiyanellava
Naa Viniyogipe Maanavarakshage
Paavanaguruvina Iridiha Pakkege
Heva Paapigalanu Serisuve
