Site icon Treasure Hymns – Kannada

ಸ್ತೋತ್ರ 134 Parishudda Devara Seveyu Dorakitu ಸಾಹಿತ್ಯ

ಸ್ತೋತ್ರ 134 Parishudda Devara Seveyu Dorakitu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಪರಿಶುದ್ದ ದೇವರ ಸೇವೆಯು ದೊರಕಿತು ಇನ್ನೇನಿನ್ನೇನು – ಘೋರ
ನರಕದ ಭೀತಿಯು ಪರಿಹಾರವಾಯಿತು ಇನ್ನೇನಿನ್ನೇನು

1. ದುಷ್ಟರ ಸಹವಾಸ ತಪ್ಪಿಯೆ ಹೋಯಿತು ಇನ್ನೇನಿನ್ನೇನು – ನಿಜ
ಶಿಷ್ಟಜನರ ಸಂಗವನು ಸೇರಲಾಯಿತು ಇನ್ನೇನಿನ್ನೇನು

2. ಜ್ಞಾನಹೀನನೆಂಬ ಕೊರತೆಯು ನೀಗಿತು ಇನ್ನೇನಿನ್ನೇನು – ಬಹು
ಮಾನಭಂಗಗೈವ ಪಾಶವು ಹರಿಯಿತು ಇನ್ನೇನಿನ್ನೇನು

3. ದಾಸಾನುದಾಸ ನಾನೇನು ಕರ್ತಗೆ ಇನ್ನೇನಿನ್ನೇನು – ಕಡು
ಗಾಸಿ ತೀರಿಸೆ ಮಹಾದೇಶನಿಹನೆನಗೆ – ಇನ್ನೇನಿನ್ನೇನು

4. ಕೋರಿದ ಕೋರಿಕೆ ಕೈಗೂಡಲಾಯಿತು ಇನ್ನೇನಿನ್ನೇನು – ಅತಿ
ಕ್ರೂರಾಸುರನನ್ನು ಜಯಗೊಳ್ಳಲಾಯಿತು ಇನ್ನೇನಿನ್ನೇನು

5. ನೀತಿಯ ಸೂರ್ಯನ ಕಾಂತಿಯ ಹೊಂದುವೆನಿನ್ನೇನಿನ್ನೇನು – ಸರ್ವ
ಪಾತಕವು ಕಳೆದು ಪುಣ್ಯಾತ್ಮನಾಗುವೆನಿನ್ನೇನಿನ್ನೇನು

6. ಸತ್ಯರೂಪಿಯು ಕರೆಯುತಲಿರ್ಪನು ಇನ್ನೇನಿನ್ನೇನು – ನಿತ್ಯ
ದತ್ಯುತ್ತಮಾನಂದವನುಭವಿಪೆನು ಇನ್ನೇನಿನ್ನೇನು

7. ಲೋಕದ ಮೇಲಣ ಭ್ರಮೆಯನ್ನು ಬಿಡುವೆನು ಇನ್ನೇನಿನ್ನೇನು
ಲೋಕರಕ್ಷಕನಾಸರೆಯನ್ನು ಹೊಗುವೆನು ಇನ್ನೇನಿನ್ನೇನು

 

 

Parishudda Devara Seveyu Dorakitu Inneninnenu – Ghora
Narakada Bheetiyu Parihaaravaayitu Inneninnenu

1. Dushtara Sahavaasa Tappiye Hoyitu Inneninnenu – Nija
Shishtajanara Sangavanu Seralaayitu Inneninnenu

2. Gnaanaheenanemba Korateyu Neegitu Inneninnenu – Bahu
Maanabhangagaiva Paashavu Hariyitu Inneninnenu

3. Daasaanudaasa Naanenu Kartage Inneninnenu – Kadu
Gaasi Teerise Mahadeshanihanenage – Inneninnenu

4. Korida Korike Kaigoodalaayitu Inneninnenu – Ati
Krooraasuranannu Jayagollalaayitu Inneninnenu

5. Neetiya Sooryana Kaantiya Honduveninneninnenu – Sarva
Paatakavu Kaledu Punyaatmanaaguveninneninnenu

6. Satyaroopiyu Kareyutalirpanu Inneninnenu _ Nitya
Datyuttamaananda vanubhavipenu Inneninnenu

7. Lokada Melana Bhrameyannu Biduvenu Inneninnenu
Lokarakshaka naasareyannu Hoguvenu Inneninnenu

Exit mobile version