Site icon Treasure Hymns – Kannada

ಸ್ತೋತ್ರ 131 Entha Aashcharya Premavidu Deva ಸಾಹಿತ್ಯ

ಸ್ತೋತ್ರ 131 Entha Aashcharya Premavidu Deva ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಎಂಥ ಆಶ್ಚರ್ಯ ಪ್ರೇಮವಿದು ದೇವ
ರಿಂದ ಪಾಪಿಗೆ ತೋರಿದುದು

1. ಚಿಂತೆಬಾಧೆಗಳನ್ನು ಕೊಟ್ಟೆ ನಾ ಕರ್ತಗೆ
ಅಂತಮ್ರುತಿಗೆ ಕಾರಣ – ನಾದ
ಇಂತಹ ಪಾಪಿಗೆ ಪ್ರೀತಿಯ ತೋರಿಸಿ
ಸ್ವಂತ ರಕ್ತವ ಚೆಲ್ಲಿದ

2. ಸಾವಿಲ್ಲದವನೆನಗಾಗಿ ಸತ್ತನು ಇದರ
ಭಾವ ತಿಳಿಯಲಪ್ಪದೆ – ಇದು
ದೇವದೂತರು ಕೂಡ ಭಾವಿಸಲಾಗದ
ದೈವಪ್ರೇಮದಗಾಧವೆ

3. ಪರಮಾಸನವ ತೊರೆದು ಬಂದನು ಇಂತಹ
ಕರುಣೆ ಎಣಿಸಲಳವೇ – ಆತ
ಸುರಿಸಿದ ರಕ್ತವ ನರರಿಗಾಗಿ ಕಡೆಗೆ
ಅರಸಿ ಹಿಡಿದ ಎನ್ನನೇ

4. ಬಹುಕಾಲ ಬಂಧಿತನಾಗಿದ್ದೆ ನಾನು ಈ
ಇಹ ಪಾಪಂಧತೆಯೊಳಗೆ – ನಿನ್ನ
ಮಹಿಮಾನೇತ್ರದ ಬೆಳಕು ದಹಿಸಿತೆನ್ನಯ ಬಂಧ
ಮಹಿಮೆಯೊಳ್ ನಿನ್ನವನಾದೆನೈ

5. ರಕ್ಷಕನಲ್ಲಿರುವೆ ನಿಶ್ಚಯವೆನಗೀಗ
ಶಿಕ್ಷಾವಿಧಿಯೇ ಇಲ್ಲವು – ಯೇಸು
ರಕ್ಷಕನ ನೀತಿವಸ್ತ್ರವೆನಗೆ ಈವು
ದಕ್ಷಯ ಪರಭಾಗ್ಯವ

 

 

Entha Aashcharya premavidu Deva
Rinda Paapige Toridudu

1. Chintebaadhegalannu Kotte Naa Kartage
Antamrutige Kaarana – Naada
Intaha Paapige Preetiya Torisi
Swanta Raktava Chellida

2. Saavilladavanenagaagi Sattanu Idara
Bhaava Tiliyalappade – Idu
Devadootaru Kooda Bhaavisalaagada
Daivapremadagaadhave

3. Paramaasanava Toredu Bandanu Intaha
Karuneyenisalalave – Aata
Surisida Raktava Nararigaagi Kadege
Arasi Hidida Ennane

4. Bahukaala Bandhitanaagidde Naanu Ee
Iha Paapaandhateyolage – Ninna
Mahimaanetrada Belaku Dahisitennaya Bandha
Mahimeyol Ninnavanaadenai

5. Rakshakanalliruve Nishchayavenageega
Shikshaavidhiye Illavu – Yesu
Rakshakana Neetivastravenage Eevu
Dakshaya Parabhaagyava

Exit mobile version