ಸ್ತೋತ್ರ 119 Shudda Yesuve Ninna Bedide ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಶುದ್ದ ಯೇಸುವೇ ನಿನ್ನ ಬೇಡಿದೆ – ಪರಿ
ಶುದ್ದಿಸು ತಡವಿಲ್ಲದೆ
1. ಭ್ರಷ್ಟಲೋಕದಲ್ಲಿ ದುಷ್ಟರ ಸಹವಾಸ
ಇಷ್ಟದಿಂದ ಸೇರಿದೆ – ನಿಜ
ಶಿಷ್ಟಜನರಿಗೆಲ್ಲಾ ಇಷ್ಟವಾದ ಸರ್ವೋ
ತೃಷ್ಟಾಜ್ಞೆಯನು ಮೀರಿದೆ
2. ದುಂದುಗಾರತನದಿಂದ ಜೀವಿಸಿ ನಾ
ನಂಧಕಾರದಿ ಮೆರೆದೆ – ಇನ್ನು
ಮುಂದೆ ಸಿಕ್ಕುವ ನಿತ್ಯಾನಂದವನ್ನು ತಳ್ಳಿ
ಮಂದಮತಿಯನೊಲಿದೆ
3. ಪಾಮರಮನದಲ್ಲಿ ಕ್ಷೇಮವೆಂದು ನಂಬಿ
ತಾಮಸವನು ಮಾಡಿದೆ – ಬಹು
ಪ್ರೇಮದಿ ತುಂಬಿದ ಸ್ವಾಮಿಯ ನೋಯಿಸಿ
ಭೂಮಿಯೊಳಗೆ ಬಾಳಿದೆ
4. ಲೋಕದಲ್ಲಾರನ್ನು ಜೋಕೆಯಿಂ ಪಿಡಿದರೂ
ಶೋಕವಾರಿಪರಿಲ್ಲವು – ಮಹಾ
ಭೀಕರದಿಂ ಬರುವೇಕದೆವೋಗ್ರವ
ಸ್ವೀಕರಿಸುವರಿಲ್ಲವೇ
5. ಈಗ ಬಂದೆನು ದೇವಾ ವೇಗದಿ ನಿನ್ನೆಡೆ
ಆಗಿಸೆನ್ನಯ ಪ್ರಾರ್ಥನೆ – ಮನೋ
ರೋಗದಿ ಬಿಡಿಸುತ್ತ ನೀಗಿಸು ದುಖವ
ಕೂಗಿದೆ ಪ್ರಿಯ ಕರ್ತನೇ
Shudda Yesuve Ninna Bedide – Pari
Shuddisu Tadavillade
1. Bhrashtalokadalli Dushtara Sahavaasa
Ishtadinda Seride – Nija
Shishtajanarigellaa Ishtavaada Sarvo
Trushtaagneyanu Meeride
2. Dundugaaratanadinda Jeevisi Naa
Nandhakaaradi Merede – Innu
Munde Sikkuva Nityaanandavannu Talli
Mandamatiyanolide
3. Paamaramanadalli Kshemavendu Nambi
Taamasavanu Maadide – Bahu
Premadi Tumbida Swaamiya Noyisi
Bhoomiyolage Baalide
4. Lokadallaarannu Jokeyim Pididaroo
Shokavaariparillavu – Mahaa
Bheekaradim Baruvekadevograva
Sweekarisuvarillave
5. Eega Bandenu Devaa Vegadi Ninnede
Aagisennaya Praarthane – Mano
Rogadi Bidisutta Neegisu Dukhava
Koogide Priya Kartane
