Site icon Treasure Hymns – Kannada

ಸ್ತೋತ್ರ 117 Varaveeyo Tande – Nootanaswaanta ಸಾಹಿತ್ಯ

ಸ್ತೋತ್ರ 117 Varaveeyo Tande – Nootanaswaanta ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ವರವೀಯೋ ತಂದೆ – ನೂತನಸ್ವಾಂತ
ವರಸುತ ಬಂದೆ
ಧರೆಯಲ್ಲಿ ನಿನ್ನನ್ನು ಕುರಿತಾದ ಸೇವೆಯಂ
ಹರುಷದಿಂದಲಿ ಮಾಡ ಸುರಿಸಯ್ಯಾ ಕೃಪೆಯಿಂದ

1. ಮುರಿದದ್ದಾಗಿರುವ – ಪಾಪಕ್ಕಾಗಿ
ಪರಿತಾಪ ಮಾಡುತ
ನರರಂ ವಿಮೋಚಿಸೆ ಸುರಿಸಿದಂಥ ದಿವ್ಯ ರು
ಧಿರದಿ ತೊಳೆದುಬಿಟ್ಟ ಪರಿಶುದ್ದ ಹೃದಯವ

2. ಸ್ಮರಿಸುತ್ತಲಿರುವ – ಪರಿಪಾಲಕನ
ವರಿಸುತ್ತಲಿರುವ
ವರ ಯೇಸು ಕ್ರಿಸ್ತನ ಪರಮಸನ್ನಿಧಿ ಬಿಟ್ಟು
ಮರಣಜೀವದಲೆಂದೂ ಸರಿಯದ ಗುಣವನ್ನು

3. ಪೊರೆಯುವಾತನಿಗೆ – ತ್ರೈಯೆಕನಾ
ಗಿರುವ ದೇವರಿಗೆ
ಹೊರತು ಮತ್ತಾರಿಗೂ ತೆರೆಯಲೊಲ್ಲದ ಒಳ್ಳೇ
ಭರವಸವುಳ್ಳಂಥ ಸ್ಥಿರವಾದ ಚಿತ್ತವ

4. ಪರಿಪಕ್ವವಾದ – ಪಾವನಗೊಳಿಪ
ಕರುಣಾತ್ಮನಿಂದ
ನಿರುಪಮನಾದ ಸದ್ಗುರುಸ್ವಾಮಿಗೊಳಗಾಗಿ
ಇರುವ ಸುಜೀವವಂ ತೊರೆಯದೆ ನಿತ್ಯವು

5. ದುರಿತವ ನೀಗಿ – ಅಂತರ್ಯವನ್ನು
ಹರಸಯ್ಯಾ ಈಗ
ತ್ವರೆಯಿಂದಿಳಿದು ಬಂದು ವರನಾಮಾಂಕಿತವನು
ಬರೆಯೆನ್ನ ಮನದಲ್ಲಿ ಪರಿಪೂರ್ಣ ಪ್ರೇಮದಿ

 

 

Varaveeyo Tande – Nootanaswaanta
Varasuta Bande
Dhareyalli Ninnannu Kuritaada Seveyam
Harushadindali Maada Surisayyaa Krupeyinda

1. Muridaddaagiruva – Paapakkaagi
Paritaapa Maaduta
Nararam Vimochise Surisidantha Divya Ru
Dhiradi Toledubitta Parishudda Hrudayava

2. Smarisuttaliruva – Paripaalakana
Varisuttaliruva
Vara Yesu Kristana Paramasannidhi Bittu
Maranajeevadalendoo Sariyada Gunavannu

3. Poreyuvaatanige – Traiyaikanaa
Giruva Devarige
Horatu Mattaarigoo Tereyalollada Olle
Bharavasavullantha Sthiravaada Chittava

4. Paripakvavaada – Paavanagolipa
Karunaatmaninda
Nirupamanaada Sadguruswaamigolagaagi
Iruva Sujeevavam Toreyade Nityavu

5. Duritava Neegi – Antaryavannu
Harasayyaa Eega
Twareyindilidu Bandu Varanaamaankitavanu
Bareyenna Manadalli Paripoorna Premadi

Exit mobile version