Site icon Treasure Hymns – Kannada

ಸ್ತೋತ್ರ 11 Parama Preetiya Devanu ಸಾಹಿತ್ಯ

ಸ್ತೋತ್ರ 11 Parama Preetiya Devanu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಪರಮ ಪ್ರೀತಿಯ ದೇವನು – ಎನ್ನ
ಕುರುಬನಾಗಿರುತಿಹನು
ಕರೆಯುತ – ನೆರೆಯುತ – ಪೊರೆಯುತ – ಮೆರೆಯುತ
ಕೊರತೆಯ ಹರಿಸುವನೈ

1. ಹಸುರುಗಾವಲುಗಳಲ್ಲಿ – ನಡಿಸಿ
ಹಸನು ನೀರಿನ ಬಳಿಯೊಳ್
ಹಸಿವ – ನಶಿವ ಸಂ – ತಸವ – ನೆಸೆವ
ಒಸಗೆ ಪಾಲಿಸಿ ಕಾವನೈ

2. ಮನವು ಬಂದಂತೆ ನಾನು – ಮಾರ್ಗ
ವನು ಬಿಟ್ಟಲೆಯುತಿರಲು
ತನುವಂ – ಮನವಂ – ಗುಣವಂ – ನೆನವಂ
ತೊನೆದುಜ್ಜೀವಿಪೆ ರಕ್ಷಕಾ

3. ಕರುಣೇಶಾ ನೀನಿರಲು – ಹೆದರೆ
ಮರಣದ ಕಣಿವೆಯೊಳು
ಕರದಂಡ – ವಿರೆಕಂಡು – ಮರೆಗೊಂಡು – ಭರಗೊಂಡೆ
ಪೊರೆವುದು ನಿನ್ನ ಶಿಲುಬೆ

4. ಔತಣವಣಿಮಾಡುವೆ – ಶಿರಕೆ
ನೀ ತೈಲವನು ಹಚ್ಚುವೆ
ಪ್ರೀತಿಯಿಂ – ಖ್ಯಾತಿಯಿಂ – ನೀತಿಯಿಂ – ಜ್ಯೋತಿಯಂ
ನೀ ತುಂಬುವೆನ್ನ ಪಾತ್ರೆಯಂ

5. ಜೀವಿತಕಾಲವೆಲ್ಲಾ – ಕೃಪೆ
ಯಾವರಿಸಿರುವದಲ್ಲಾ
ಜೀವದಿ – ಭಾವದಿ – ಯಾವಜ್ಜೀ – ವಾವಧಿ
ನಾ ವಾಸಿಸುವೆ ನಿನ್ನೊಳು

 

 

Parama Preetiya Devanu – Enna
Kurubanaagirutihanu
Kareyuta-Nereyuta-Poreyuta-Mereyuta
Korateya Harisuvanai

1. Hasurugaavalugalali – Nadisi
Hasanu Neerina Balyol
Hasiva-Nashivasam-Tasava-Neseva
Osage Paalisi Kaavanai

2. Manavu Bandante naanu-Maarga
Vanu Bittaleyutiralu
Tanuvam-Manavam-Gunavam-Nenavam
Tonedujjeevipe Rakshakaa

3. Karuneshaa Neeniralu-Hedare
Maranada Kaniveyolu
Kardanda-vrekandu-Maregondu-Bharagonde
Porevadu Ninna Shilube

4. Autanavanimaaduve-Shirake
Nee Tailavanu Hachhuve
Preetiyim-Khyaatiyim-Neetiyim-Jyotiyam
Nee Tumbuvenna Paatreyam

5. Jeevitakaalavella-Krupe
Yaavarisiruvadalla
Jeevadi-Bhaavadi-Yaavajjee-Vaavadhi
Naa Vaasisuve Ninnolu

Exit mobile version