Site icon Treasure Hymns – Kannada

ಸ್ತೋತ್ರ 108 Lokava Bidabeku – Hrudayada ಸಾಹಿತ್ಯ

ಸ್ತೋತ್ರ 108 Lokava Bidabeku – Hrudayada ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಲೋಕವ ಬಿಡಬೇಕು – ಹೃದಯದ
ಶೋಕವ ಸುಡಬೇಕು
ಭೀಕರ ಪಾಪಕ್ಕೆ ಆಸ್ಪದವಾಗಿ ವ
ಶೀಕರಿಸುವ ಬಹು ಮಾಯಾಕಾರದ

1. ನೆಂಟರು ಹಳಿಯುವರು – ಬಹುತರ
ಕಂಟಕಳೆಯುವರು
ತುಂಟರು ನಿನ್ನನು ಹೇಳನೆಮಾಡುತ
ತಂಟೆಗಳನು ಬರಮಾಡುತಲಿರುವರು

2. ಆತ್ಮದಿ ಬೇಡುತಿರು – ನೀ ಪರ
ಮಾತ್ಮನ ಪಾಡುತಿರು
ಆತ್ಮೀಕವ ವರಗಳ ಹೊಂದುತನೇಕ ದು
ರಾತ್ಮನೆದುರಿಸಿ ಮೋಕ್ಷವ ಬಯಸುತ

3. ಭಯವೇತಕೆ ನಿನಗೆ – ದೇವರು
ಜಯವೀವನು ಕೊನೆಗೆ
ಪಯಣದ ಸರಣಿಯೊಳ್ ಬರುವ ವಿಕಲ್ಪವ
ದಯದೆ ಹರಿಸಿ ರಕ್ಷಿಸುವನು ದೇವರು

4. ಹಿಡಿದು ವಿಶ್ವಾಸವನು – ಸಂತತ
ಪಡೆದು ಸುಭಾಗ್ಯವನು
ತೊಡೆದು ನಶ್ವರವಾದ ಭೋಗಗಳೆಲ್ಲವ
ನಡೆಯುತ ಶಾಶ್ವತ ರಕ್ಷಣಮಾರ್ಗದೊಳ್

5. ಮೋಕ್ಷವ ನೋಡುತಿರು – ಯೇಸು ಕ
ಟಾಕ್ಷವ ಬೇಡುತಿರು
ಈ ಕ್ಷಣವಾತನ ವಾಕ್ಯಾಮೃತವನ
ಪೇಕ್ಷಿಸಿ ಭಾಗ್ಯವ ಪಡೆಯುತ ಮನದೊಳು

 

 

Lokava Bidabeku – Hrudayada
Shokava Sudabeku
Bheekara Paapakke Aaspadavaagi Va
Sheekarisuva Bahu Maayaakaarada

1. Nentaru Haliyuvaru – Bahutara
Kantakaleyuvaru
Tuntaru Ninnanu Helanemaaduta
Tantegalanu Baramaadutaliruvaru

2. Aatmadi Bedutiru – Nee Para
Maatmana Paadutiru
Aatmeekava Varagala Hondutaneka Du
Raatmanedurisi Mokshava Bayasuta

3. Bhayavetake Ninage – Devaru
Jayaveevanu Konege
Payanada Saraniyol Baruva Vikalpava
Dayade Harisi Rakshisuvanu Devaru

4. Hididu Vishwaasavanu – Santata
Padedu Subhaagyavanu
Todedu Nashvaravaada Bhogalalellava
Nadeyuta Shaashvata Rakshanamaargadol

5. Mokshava Nodutiru – Yesu Ka
Taakashava Bedutiru
Ee Kshanavaatana Vaakyaamrutavan
Pekshisi Bhaagyava Padeyuta Manadolu

Exit mobile version