ಸ್ತೋತ್ರ 206 Hallelooya Haadipaadi Mahimeyulla Devage ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಹಲ್ಲೆಲೂಯ ಹಾಡಿಪಾಡಿ ಮಹಿಮೆಯುಳ್ಳ ದೇವಗೆ
ಎಲ್ಲೆಲ್ಲಿಯೂ ಬರಲಿ ಕೀರ್ತಿ ಅರಸನಾದ ದೇವಗೆ
1. ದೇವಲೋಕದಲ್ಲಿ ದೂತರೆಲ್ಲ ಹಾಡುವಂತೆಯೇ
ಭಾವಭಕ್ತಿಯಿಂದ ಬಾಲರೆಲ್ಲ ರಾಗವೆತ್ತಿರಿ
2. ಬನ್ನಿರೀಗ ಏಕಮನಸ್ಸಿನಿಂದ ರಾಗನುಡಿಸುವ
ಬನ್ನಿ ಹರ್ಷಗೀತಗಳನು ಜೊತೆಯವೆರಸಿ ಹಾಡುವ
3. ಕೂಸುಗಳ ಸ್ತೋತ್ರಗಳು ದೇವಗಿಷ್ಟವಾದವು
ದಾಸರಾಗಿ ದೇವಮಹಿಮೆ ಪೊಗಳ ಬನ್ನಿ ಕೂಡುತ
4. ನೀನು ಮೆರೆವ ರೀತಿಯನ್ನು ತಿಳಿಯಪಡಿಸು ದೇವನೆ
ನೀನು ನಿನ್ನ ಸತ್ಯ ನಮಗೆ ಬಿಡದೆ ನಿತ್ಯ ತೋರಿಸು
5. ನಿನ್ನ ವಾಕ್ಯ ಧರಣಿಯಲ್ಲಿ ಬೇಗಬೇಗ ಹರಡಲಿ
ಮನ್ನಿಸುತ್ತಲೆಲ್ಲ ಜನವು ನಿನ್ನೊಳ್ ಭಕ್ತಿ ತೋರಲಿ
Hallelooya Haadipaadi Mahimeyulla Devage
Ellelliyoo Barali Keerti Arasanaada Devage
1. Devalokadalli Dootarella Haaduvanteye
Bhaavabhaktiyinda Baalarella Raagavettiri
2. Bannireega Ekamanassininda Raaganudisuva
Banni Harshageetagalanu Joteyaverasi Haaduva
3. Koosugala Stotragalu Devagishtavaadavu
Daasaraagi Devamahime Pogala Banni Kooduta
4. Neenu Mereva Reetiyannu Tiliyapadisu Devane
Neenu Ninna Satya Namage Bidade Nitya Torisu
5. Ninna Vaakya Dharaniyalli Begabega Haradali
Mannisuttalella Janavu Ninnol Bhakti Torali