ಸ್ತೋತ್ರ 36 Sundaraparadharanaa Saanandasabhaakaranaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಸುಂದರಪರಧರಣಾ ಸಾನಂದಸಭಾಕರಣಾ
ಕುಂದಿದ ಆತ್ಮದಿ ನೊಂದು ನಿನ್ನಡಿಗೆ ನಾ
ಬಂದೆನೆನ್ನಾದರಿಸೈ
1. ಅಂಧಪರಿಹರನೇ ಎನ್ನ ವಂದಿತ ಫ್ರಭುವರನೇ
ಇಂದೆನ್ನ ಕರುಣಿಸಿ ಬಂಧವ ಬಿಡಿಸಿ ಈ
ಕಂದನನ್ನಾದರಿಸೈ
2. ಆದಿನರರ ಪಾಪವನ್ನು ಛೇದಿಸಿ ಬಂದವನೇ
ಮೇದಿನಿಯೊಳಗೆನ್ನ ರೋಧನೆಯೊರಸೀಗ
ಮೋದದಿಂದಾದರಿಸೈ
3. ದಾವೀದ ಕುಲಶಿರನೇ ಸಂಭಾವಿತ ಗುಣಧರನೇ
ತೀವಿದ ಕ್ರುಪೆಯೊಳು ಜೀವಿಸಮಾಡೆನ್ನ
ಭಾವಿಸಿಯಾದರಿಸೈ
4. ಎನ್ನ ವಿಮೋಚಕನೇ ಪರಸನ್ನಿಧಿ ಕೊಡುವವನೇ
ನಿನ್ನನ್ನು ಸೇವಿಸಿ ಮನ್ನಣೆಹೊಂದ ಪ್ರ
ಸನ್ನತೆ ದಯಮಾಡೈ
5. ಪರಮಂಡಲದೆವಾ ನರನಿರುತರ ಸ್ಥಿರಜೀವ
ಧರಣಿಯ ವರಗಳ ಬರಿಸನಂತರದಲ್ಲಿ
ಪರಮರೊಳಗೆ ತರಿಸೈ
Sundaraparadharanaa Saanandasabhaakaranaa
Kundida Aatmadi Nondu Ninnadige Naa
Bandenennaadarisai
1. Andhapariharane Enna Vandita Prabhuvarane
Indenna Karunisi Bandhava Bidisi Ee
Kandanannaadarisai
2. Aadinarara Paapavannu Chhedisibandavane
Mediniyolagenna Rodhaneyoraseega
Modadindaadarisai
3. Daaveedakulashirane Sambhaavita Gunadharane
Teevida Krupeyolu Jeevisamaadenna
Bhaavisiyaadarisai
4. Enna Vimochakane Parasannidhi Koduvavane
Ninnannu Sevisi Mannanehonda Pra
Sannate Dayamaadai
5. Paramandaladevaa Naranirutara Sthirajeeva
Dharaniya Varagala Barisanantaradalli
Paramarolage Tarisai