ಸ್ತೋತ್ರ 103 Naashavaaguvadeko – O Maanavaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ನಾಶವಾಗುವದೇಕೋ – ಓ ಮಾನವಾ
ನಾಶವಾಗುವದೆಕೋ
ನಾಶದಲ್ಲೆನಗೆ ಸಂತೋಷವಿಲ್ಲ ನಿಜವು
ದೋಷವ ಬಿಟ್ಟು ಬದುಕಲಾಸೆಗೊಂಡು ನಡೆಯೋ
1. ಮೊಸದಾರಿಯಲ್ಲಿದ್ದೀ ಈ ಲೋಕದ
ದಾಸತನದಲ್ಲಿದ್ದೀ
ಈ ಶರೀರದ ದುರಿತಾಸೆಗಳನು ಬಳಸಿ
ಪಾಶದೊಳಗೆ ಸಿಕ್ಕಿ ವಾಸಮಾಡುವದೇನೋ
2. ಪಾಪ ವಿಷವು ಕಾಣೋ ಎನ್ನ ನೀತಿ
ಕೋಪವು ಸುಡದೇನೋ
ಶಾಪವಲ್ಲದೆ ನ್ಯಾಯತೀರ್ಪು ಬರುವದಲ್ಲ
ಈ ಪರಿಯಂತರವು ತಾಪವಿಲ್ಲದೆ ನೀನು
3. ಎನ್ನ ಮಗನು ತಾನೇ ರಕ್ಷಿಸ ಬಂದ
ನನ್ನ ವಿಮೋಚಕನೇ
ಇನ್ನು ದುರ್ಮಾರ್ಗಗಳನ್ನು ಬಿಟ್ಟು ಬಿಡದೆ
ಸನ್ನುತನನ್ನು ನಂಬಿ ಧನ್ಯನಾಗಲೊಲ್ಲದೆ
4. ನಾಳೆಯಂದಿರಬೇಡ ಮರಣದ
ವೇಳೆ ಬಹುದು ಗಾಢ
ಕಾಲಕಳೆಯದೆನ್ನನಾಲಿಸುವದ ಬಿಟ್ಟು
ಮಾಳುವ ಲೋಕದ ಕಾವಳದೊಳ್ ಸಿಕ್ಕಿ
5. ವೇದವಾಕ್ಯವ ಕೇಳು ಸದ್ಭಕ್ತಿಯ
ಸಾಧಿಸಿದರೆ ಮೇಲು
ಈ ದಿನದಲ್ಲೇ ಎನ್ನ ಮೋದದಾಶ್ರಾಯ ಹೊಂದಿ
ಸಾದುಸಜ್ಜನರೊಳು ಕಾದು ಗತಿ ಸೇರದೆ
Naashavaaguvadeko – O Maanavaa
Naashavaaguvadeko
Naashadallenage Santoshavilla Nijavu
Doshava Bittu Badukalaasegondu Nadeyo
1. Mosadaariyalliddee Ee Lokada
Daasatanadalliddee
Ee Shareerada Duritaasegalanu Balasi
Paashadolage Sikki Vaasamaaduvadeno
2. Paapa Vishavu Kaano Enna Neeti
Kopavu Sudadeno
Shaapavallade Nyaayateerpu Baruvadalla
Ee Pariyantaravu Taapavillade Neenu
3. Enna Maganu Taane Rakshisa Banda
Nanna Vimochakane
Innu Durmaargagalannu Bittu Bidade
Sannutanannu Nambi Dhanyanaagalollade
4. Naaleyandirabeda Maranada
Vele Bahudu Gaadha
Kaalakaleyadennanaalisuvada Bittu
Maaluva Lokada Kaavaladol Sikki
5. Vedavaakyava Kelu Sadbhaktiya
Saadhisidare Melu
Ee Dinadalle Enna Modadaashraya Hondi
Saadusajjanarolu Kaadu Gati Serade