ಸ್ತೋತ್ರ 23 Parameshaa Kartane Dharaneeshaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪರಮೇಷಾ ಕರ್ತನೇ ಧರಣೀಶಾ ಮೆಸ್ಸೀಯನೇ
ನಿರುಪಮಪೂಜ್ಯನೇ ವರನಾಮಾಂಕಿತನೇ
ಸುರಜನರಿಂದಲೂ ಹರುಶದೊಳೆಂದಿಗೂ
ಸ್ಮರಣೆಯ ಹೊಂದುತ ಪರದೊಳಿರುವ
1. ವರ ಯೇಸು ಕ್ರಿಸ್ತನೇ ಪರಸತ್ಯ ಸಂಧನೇ
ಪೊರೆಯುವ ನಾಥನೇ ಚಿರಕಾಲ ಬಾಳ್ವನೇ
ಧರೆಯೊಳ್ ಪಾಪದಿಂ ಮರುಳಾದವರಿಗೆ
ನರಕ ಬಾಧೆಯ ಹರಿಸುತ್ತಿರುವ
2. ಸರುವರಂ ಪಾಲನೆ ಶರಣರಂ ಕಾಯ್ವನೇ
ಪರಭಾಗ್ಯದೀಷನೇ ವರದ ಗುರುರಾಯನೇ
ತರತರವಾದ ಸುವರಗಳನೀಯುತ
ನಿರುತವು ದಾಸರ ಹರಸುತ್ತಿರುವ
3. ಕಾರುಣಾಕೂಪಾರನೇ ಸ್ಮರಣೆಯ ಪಾತ್ರನೇ
ಭರಿತ ಕಷ್ಟಗಳನ್ನು ಪರಿಹಾರಮಾಳ್ಪನೆ
ದುರುಳರಿಗಾಗಿಯೇ ಮರುಗುತಿರುತ ದಿವ್ಯ
ಕರತಳದಿಂ ಮನುಜರನು ಸಲಹೋ
4. ಕರುಣೇಶಪುತ್ರನೇ ಪರತರಾಚಾರ್ಯನೇ
ನರರ ಸಂಜೀವನೆ ಪರಿಪೂರ್ಣ ಮಿತ್ರನೇ
ಎರಗಿದೆನ್ನೆ ಮಹಾಚರಣಕೆ ಭಾರ್ತನೆ
ಹರಣವ ತಪ್ಪಿಸ ಭರದಿ ತಕ್ಷಿಸು
5. ಪರಿಶುದ್ದ ದೇವನೇ ದುರಿತಸಂಹಾರನೇ
ಸ್ಥಿರವಾದ ಕಾಂತನೇ ಗರಿಷ್ಟ ಪ್ರಭಾವನೇ
ಅರಸುತಾ ಬಂದು ನಾ ಶರಣುಹೊಕ್ಕೆನು ನಿನ್ನ
ನಿರಘಸನ್ನಿಧಿಗಾದರಿಸಿ ಸುರಿಸಿ
Parameshaa Kartane Dharaneeshaa Messeeyane
Nirupamapoojyane Varanaamaankitane
Surajanarindaloo Harushadolendigoo
Smaraneya Honduta Paradoliruva
1. Vara Yesu Kristane Parasatyasandhane
Poreyuva Naathane Chirakaala Baalvane
Dhareyol Paapadim Marulaadavarige
Naraka Baadheya Harisuttiruva
2. Saruvaram Paalane Sharanaram Kaayvane
Parabhaagyadeeshane Varada Gururaayane
Tarataravaada Suvaragalaneeyuta
Nirutavu Daasara Harasuttiruva
3. Karunaakoopaarane Smaraneya Paatrane
Bharita Kashtagalannu Parihaaramaalpane
Durularigaagiye Marugutiruta Divya
Karataladim Manujaranu Salaho
4. Karuneshaputrane Parataraachaaryane
Narara Sanjeevane Paripoorna Mitrane
Eragidenne Mahaacharanake Bhartane
Haranava Tappisa Bharadi Takshisu
5. Parishudda Devane Duritasamhaarane
Sthiravaada Kantane Garishta Prabhaavane
Arasutaa Bandu Naa Sharanuhokkenu Ninna
Niraghasannidhigaadarisi Surisi